ಅಲ್ಲಮ ನಿನಗೆ ಎಲ್ಲಿಂದ ಬಂತೊ ಆ ಮಿಡಿತ
ಆ ಲತೆ ಹೇಗೆ ಮನಸೋತು ಬಂದಳೊ ಆಗ
ಬವಳಿ ಬಂದು ಮೈಮರೆತು ಹೇಗೆ ಬಿದ್ದಳೊ
ತತುಕ್ಷಣವೆ ಧಿಮಿಗುಡುವ ಮೃದಂಗ ಹಾರಿತೆಲ್ಲಿಗೊ
ಅದೇನು ಕಾತುರ, ಜತೆಜತೆಯ ಆತುರ ಹೀಗೆ?
ಬೆನ್ಬಿಡದೆ ಏಕೆ ಹಿಂಬಾಲಿಸಿದೆ ನೀ ಹಾಗೆ?
ಅರಿಯದೆ ನಿನಗರಿಯದೆ ? ಹೇಳು ಈಗ
ಕಾಮಲತೆ ಜತೆಗೆ ಹೇಗೆ ಹಬ್ಬಿಕೊಂಡೆ ಆಗ?
ಕಡೆಮೊದಲು ಕಾಣದೆ ತಬ್ಬಿ ಉಬ್ಬಿ ನೀವಿದ್ದು
ಮೈದುಂಬಿ ತವಕದುಬ್ಬೇಗದಲ್ಲಿ ಲೋಕ ಮರೆತದ್ದು
ಎಷ್ಟುಸಲ ನೀ ಕಾಲ ಕಳೆದದ್ದು ಎಷ್ಟುಸಲ?
ಆ ಲತೆ ಹೋದರೆ ಅಳುತ ಮೈಮರೆತೆ ಎಷ್ಟುಸಲ?
ಬಿಡದೆ ಬಿಟ್ಟರೂ ಬಿಡದೆ ಕಾಡಿದ್ದು ಎಷ್ಟುಸಲ?
ಒಂದು ಬಿಟ್ಟು ಮತ್ತೊಂದು ಹುಡುಕಿದುದು ಸುಲಭ ಫಲ?
ಅಲ್ಲಮ ನಿನಗೆ ಎಲ್ಲಿಂದ ಬಂತೊ ಆ ಮಿಡಿತ
ಹೊಸ ಮೆರಗು ಬೆರಗು ಬೆಳೆ ಬೆಳೆದ ಜೀವಸ್ಪಂದ
ಹೇಳೊ ಹೇಳು ನೀ ಏಕಾಏಕಿ ಸಾಧಿಸಿದೆಯೊ ಹೊಸ ಬೆಳಕ?
ನಾನು ನಿಮಗಿಂತ ಹಿರಿಯನೂ, ನಿಮ್ಮ ಓರಗೆಯವನೂ, ಗೆಳೆಯನೂ ಆಗಿದ್ದರೆ ಹೇಗೋ ಬರೆದೆ ಈ ಕವನ, ಏಕೋ ಬರೆದೆ ಕವನ ಎಂದು ಕೇಳಿರುತ್ತಿದ್ದೆ!
ಪ್ರತ್ಯುತ್ತರಅಳಿಸಿ