ವೇಣುಗೋಪಾಲ ಸೊರಬ ಅವರು ನನ್ನ ಕಾಲೇಜಿನ ದಿನಗಳಲ್ಲಿ ನಾನು ಗೀಚಿದ್ದನ್ನೆಲ್ಲ ಓದುವ ಮೊದಲ ಓದುಗರಾಗಿದ್ದರು. ವೈಎನ್ ಕೆ ಅಂದು ಪ್ರಜಾವಾಣಿ ಸಂಪಾದಕರಾಗಿದ್ದರು, ಅಲ್ಲದೆ ಸೊರಬ ಅವರ ನಿಕಟ ಪರಿಚಯದವರೂ ಆಗಿದ್ದಿರಬೇಕು. ಈ ಕವಿತೆಯನ್ನು ಓದಿದ ಸೊರಬ ಅವರು 'ನಿಮಗೆ ವೈಎನ್ ಕೆ ಅವರ ಪರಿಚಯ ಮಾಡಿಸುತ್ತೇನೆ. ಅವರಿಗೆ ಈ ಪದ್ಯ ತೋರಿಸೋಣ. ಅವರು ಹೊಸ ಬರೆಹಗಾರರಿಗೆ ಪ್ರೋತ್ಸಾಹ ನೀಡುತ್ತಾರೆ. ಪ್ರಜಾವಾಣಿಯಲ್ಲಿ ನಿಮ್ಮ ಪದ್ಯ ಪ್ರಕಟವಾಗಬಹುದು` ಎಂದರು. ನನ್ನ ಮೇಷ್ಟ್ರು ನನ್ನ ಹಿತವನ್ನೆ ಬಯಸಿದ್ದರು. ಆದರೆ ನನ್ನ ಮನಸ್ಸು ಇದು ಸರಿ ದಾರಿ ಎಂದು ಒಪ್ಪಿಕೊಳ್ಳಲಿಲ್ಲ. ಅಂದ ಮೇಲೆ ಮೇಷ್ಟ್ರೊಂದಿಗೆ ವೈ ಎನ್ ಕೆ ಅವರನ್ನು ಕಾಣಲೂ ಹೋಗಲಿಲ್ಲ.. ಇದು ಅಂದು ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದರೆ ಯಾರ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರುತ್ತಿತ್ತೋ ಕಾಣೆ. ನಂತರ 1985ರಲ್ಲಿ ಪ್ರಕಟವಾದ ನನ್ನ ಮೊದಲ ಕವನ ಸಂಕಲನ 'ಗಿಣ್ಣು' ಸೇರಿಕೊಂಡಿತು. ಯಾರ ಗಮನಕ್ಕೂ ಬಾರದೆ ಹೋಯಿತು. ಅದನ್ನಿಲ್ಲಿ ಮತ್ತೆ ನಿಮ್ಮ ಗಮನಕ್ಕೆ ತರುತ್ತಿದ್ದೇನೆ.
ಇಲ್ಲಿ ಪ್ರಕಟವಾಗಿರುವ ಉಳ್ಳವರ ಪರವಾದ ಬಲಿಷ್ಟ ವ್ಯವಸ್ಥೆ ತಂದೊಡ್ಡಿದ ದಾರುಣ ಸ್ಥಿತಿ ಮತ್ತು ಅದರಿಂದ ಉಂಟಾದ ದೀನ ಮತ್ತು ಅಸಹಾಯ ಸ್ಥಿತಿಯಲ್ಲೂ ಬಲಿಯಾಗಲು ಸಿದ್ಧವಿಲ್ಲದ ಪ್ರಜ್ಞೆಯೇ ಪ್ರಭುತ್ವವ ವಿರೋಧಿ ಆಗಿದೆ. ಇದು ಮಾನವನೊಳಗಿರುವ ಮತ್ತೊಬ್ಬನನ್ನು ತನ್ನ ಅಡಿಯಾಳಾಗಿಸಿಕೊಳ್ಳುವಲ್ಲಿನ ಹೆಗ್ಗಳಿಕೆಯ ಖುಷಿ ಮತ್ತು ಸರೀಕರ ಸರಿಸಮ ತಲೆ ಎತ್ತಲಾಗದೆ ಹೋದವನ ವಿಷಾದ - ಇವುಗಳ ನಡುವಿನ ತಿಕ್ಕಾಟವಾಗಿದೆ. ಕೆಳಗೆ ಬಿದ್ದವನ ಪರವಾದ ಓಲುವೆ ಮನ ಒಪ್ಪುವಂಥದ್ದಾಗಿದ್ದು ಅವನ ಮನಸ್ಥಿತಿ ಇಲ್ಲಿ ಕೇಂದ್ರಬಿಂದುವಾಗಿದೆ.
ಪ್ರತಿಮೆ ಮತ್ತು ಭಾವ ನಿರೂಪಣೆ ಇಲ್ಲಿ ಒಂದಕ್ಕೊಂದು ಹೆಣೆದುಕೊಂಡಿದ್ದು ತೀವ್ರ ಅನುಭವಕ್ಕೆ ಕಾರಣವಾಗಿರುವಂತೆ ಇದೆ.
# .
ಕೊಂಡಿಗಳೋ ಕೊಂಡಿಗಳು
ಅರೆ-ಮರೆ ಬಾಚಿ ಬಿಗಿಯುವವೊ
ಕೊಕ್ಕೆಗಳೋ ಅಂಕುಶಗಳು
ಬಿಗಿ ಹಿಡಿದು ಜಡಿಯುವವೊ
ಕುಣಿಯುತ ಕುಳಿ ಗಣಿ ತೋಡುತ
ದಯೆಯ ಮುಖಕೆ ರಾಚುತ ಬಡಿಯುವವೊ
ಕೂದನಿ ಮಾರ್ದನಿ ಇಲ್ಲದ ಘೀಳೋ
ಇದು ಘೀಳು: ಕರಿ ಮಟ್ಟಿ ಯಾ ಗಟ್ಟಿ
ಜಗಜಟ್ಟಿಯ ತೊಡೆ ತೋಳಬಲದ ಘೀಳು.
ಅಂಕೆಗೆ ಪಂಖ ಚಾಮರ ಬೀಸುವ
ನಾಲ್ವರ ಹಿಂಡು ಭಾಜನ ಭೋಜನವೋ
ಅಬ್ಬರ ಉಬ್ಬರ ಹೂತ್ಕರಿಸೊ ಬಲವೋ
ಮುನ್ನೋಟದ ಹೆಜ್ಜೆ
ಅಳಿಸುವ ಛಲವೋ
ಮುಂಗಾಣುವ ಬಲ
ಸಡಿಲಿಸುವ ಹಟವೋ
ಅದು ಸಲ್ಲ ಇದು ಹೊಲ್ಲ
ಮೈ ಮನಗಳ ಕುಣಿಕೆಯೋ
ಕತ್ತರಿಸುವ ಉತ್ತರಿಸುವ
ಚಾಣದ ಏಟು ಉಳಿಯ ಪೋಕು
ತೆಗೆದ ಕೆತ್ತೆನೆಯ ಕುಸುರಿ ಕೆಲಸವೋ
ಉತ್ಬಿತ್ತು ಉತ್ಬಿತ್ತು ನಿರ್ಜೀವವೋ
ಮುರುಟಿರೋ ಕೈ ಕಾಲು ಎದೆ ಕಣ್ಣು
ತುಂಬ ಸುತ್ತಿದೆಯೋ ಕೊಂಡಿಯ ಗೂಡು
'ಗಿಣ್ಣು' ಕವನ ಸಂಕಲನದಿಂದ